ಟೆಫ್‍ಲಾನ್
ಸಂಶ್ಲೇಷಿತ (ಅಂದರೆ ಮನುಷ್ಯಕೃತ) ಎಳೆಗಳ ಪೈಕಿ ಒಂದು. ಉನ್ನತ ಶಾಖನಿರೋಧಕತ್ವ ಮತ್ತು ರಾಸಾಯನಿಕ ಕ್ರೀಯಾನಿರೋಧಕತ್ವವಿರುವ ಒಂದು ಹೊಸ ವಿನೈಲ್ ಮಾದರಿಯ ಪಾಲಿಮರ್ (ಪಾಲಿ ಟೆಟ್ರ ಫ್ಲೂರೋ ಎಥಿಲಿನ್) 1941ರಲ್ಲಿ ಕಂಡುಹಿಡಿಯಲ್ಪಟ್ಟಿತು. 1943ರಲ್ಲಿ ಪ್ರಥಮವಾಗಿ ಇದನ್ನು ಟೆಫ್‍ಲಾನ್ ಎಂಬ ವಾಣಿಜ್ಯನಾಮದಿಂದ ಹೊರತಂದು 1954ರಲ್ಲಿ ಎಳೆಗಳ ರೂಪದಲ್ಲಿ ಮಿತಪ್ರಮಾಣದಲ್ಲಿ ಮಾರಾಟ ಮಾಡಲಾಯಿತು. ಟೆಫ್‍ಲಾನ್ ಶಾಖ ಮತ್ತು ರಾಸಾಯನಿಕ ಕ್ರಿಯಾನಿರೋಧಕ ಗುಣ ಮತ್ತು ವಿಶಿಷ್ಟವಾದ ಬಂದವಿರೋಧಕ ಬಾಹ್ಯಮುಖ ಮರ್ದಕ (ಆ್ಯಂಟಿ ಅಡ್‍ಹೀಸಿವ್ ಸರ್ಫೇಸ್ ಫ್ರಿಕ್ಷನ್) ಮತ್ತು ವಿದ್ಯುತ್ ಗುಣಗಳಿಗೆ ಸುಪ್ರಸಿದ್ಧವಾಗಿದೆ. ಟೆಫ್‍ಲಾನ್ ಬಟ್ಟೆಗಳನ್ನು ಅತ್ಯಲ್ಪ ಸಂಕೋಚ ಮತ್ತು ಸಾಮಥ್ರ್ಯಗುಂದದ ಸ್ಥಿತಿಯಲ್ಲಿ 24 ಗಂಟೆಗಳ ವರೆಗೂ ಸುಮಾರು 2900 ಛಿ ಉಷ್ಣತೆಯಲ್ಲಿ ಸಾರ ಸಲ್ಪ್ಯೂರಿಕ್ ಆಮ್ಲ ಅಥವಾ ಸಾರ ನೈಟ್ರಿಕ್ ಆಮ್ಲ ಅಥವಾ ಅವುಗಳ ಮಿಶ್ರಣದಲ್ಲಿಯೂ ಅಥವಾ 1000 ಛಿ ಉಷ್ಣತೆಯಲ್ಲಿ 50%ರಷ್ಟು ಸಾರ ಸೋಡಿಯಮ್ ಹೈಡ್ರಾಕ್ಸೈಡ್ ದ್ರಾವಣದಲ್ಲೂ ತೆರೆದಿಡಬಹುದು. ಈ ದಾರ ಹಾಗೂ ಬಟ್ಟೆಯನ್ನು 2750 ಛಿ ಉಷ್ಣತೆಯಲ್ಲಿ ಸಂಕೋಚವಾಗದಿರುವಂತೆ ಸ್ಥಿರಗೊಳಿಸಬಹುದು. ಇದಕ್ಕಾಗಿ ಇವನ್ನು ಅಧಿಕ ಉಷ್ಣತೆಗಳಲ್ಲಿ ವಿರಾಮ ಸ್ಥಿತಿಯಲ್ಲಿ ಸ್ವಲ್ಪ ಸ್ವಲ್ಪ ಕಾಲಪೂರ್ವ ಭಾವಿಯಾಗಿ ಸಂಕೋಚನೆ ಮಾಡಬೇಕು. ಟೆಫ್‍ಲಾನ್ ಎಳೆ 3150 ಛಿ ಉಷ್ಣತೆಯಲ್ಲಿ ಸಾಕಷ್ಟು ಮಟ್ಟದ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಮತ್ತು 2750 ಛಿ ಉಷ್ಣತೆಯವರೆಗಿನ ಉಷ್ಣತೆಗಳಿಗೆ ಯಾವ ಶಕ್ತಿಹೀನತೆಯೂ ಇಲ್ಲದೆ ಇದನ್ನು ಸುದೀರ್ಘಕಾಲ ಒಡ್ಡಬಹುದು. ಹೇಗೆ ಆಗಲಿ ಎಳೆಗಳನ್ನು 2000ಛಿ ಉಷ್ಣತೆಗಿಂತ ಹೆಚ್ಚಾಗಿ ಕಾಯಿಸುವಾಗ ನಂಜಿನ ಅನಿಲಗಳು ಬಿಡುಗಡೆಯಾಗುವುದರಿಂದ ಅವನ್ನು ಉಸಿರಿನಲ್ಲಿ ಎಳೆದುಕೊಳ್ಳದಂತೆ ಸಾಕಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕು.

	ಟೆಫ್‍ಲಾನ್ ಎಳೆಗಳ ಬಣ್ಣ ಸಾಮಾನ್ಯವಾಗಿ ಕಂದು. ಆದರೆ ಇದನ್ನು ಖನಿಜಾಮ್ಲಗಳಿಂದ ತೀಕ್ಷ್ಣ ಆಮ್ಲೀಕರಣಕ್ಕೆ ಒಳಗಾಗಿಸಿ ಚಲುವೆ ಮಾಡಬಹುದು. ಅಥವಾ 2600ಛಿ ಉಷ್ಣತೆಯವರೆಗೆ ಕಾಸಿ ವರ್ಣಛಾಯೆಯನ್ನು ತಿಳಿಗೊಳಿಸಬಹುದು. ಟೆಫ್‍ಲಾನ್ ಎಳೆಗಳನ್ನು ಉಪಯೋಗಿಸಿ ಸರ್ವೇ ಸಾಧಾರಣ ಉಪಕರಣಗಳಿಂದಲೇ ನೇಯಬಹುದು; ಕಸೂತಿ ಹಾಕಬಹುದು; ನಿಷ್ಕಲ್ಮಷಗೊಳಿಸಬಹುದು, ಮತ್ತು ವಿಶೇಷ ತಾಂತ್ರಿಕ ಕ್ರಿಯೆಗಳನ್ನು ಉಪಯೋಗಿಸಿ ಹೆಚ್ಚು ತಾಪಸ್ಥಿರತೆಯಲ್ಲಿ ವಿಸರಿತ ಮತ್ತು ಕ್ಷಾರ ವರ್ಣಗಳಲ್ಲಿ ಆಯ್ದ ಬಣ್ಣಗಳಿಂದ ಬಣ್ಣ ಹಾಕಬಹುದು.
(ಕೆ.ಬಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ